ಶುಕ್ರವಾರ, ಮೇ 6, 2011

ಅಂಕಿತಾರಾಣೆ--ಪಾನಿಪುರಿ ಪುರಾಣ..!


ನೀವು ಪಾನಿಪೂರಿ ಪ್ರಿಯರೇ? ಹಾಗಿದ್ದರೆ ಇದನ್ನು ತಪ್ಪದೇ ಓದಿ...!
ಹೌದು ಇದೊಂಥರಾ ವಿಚಿತ್ರ ಟೈಟಲ್ಲು. ಹತ್ತು ನಿಮಿಷದ ತನ್ನ ಬೊಗಳೆಯಲ್ಲಿ
ರಾಜಪುರೋಹಿತ್ ಎಂಬ ವ್ಯಕ್ತಿ ಸ್ವತಃ ಕೆಡುವುದಲ್ಲದೆ ತನ್ನ ಪಾರ್ಟಿ ಬಿಜೆಪಿಯ
ವರ್ಚಸ್ಸನ್ನೂ ಹಾಳುಗೆಡವಿದ. ಅಂಕಿತಾ ಅವಳ ವ್ಯಕ್ತಿತ್ವ ಅವಳ ಚಾರಿತ್ರ್ಶವಧೆ
ಮಾಡುವ ಮಾತು ಆಡಿದ ರಾಜಪುರೋಹಿತ ಈಗ ಅವಳ ಕ್ಷಮೆ ಕೇಳಿದ.
ನಮ್ಮಲ್ಲಿ ಒಂದು ಗಾದೆ ಇದೆ "ಗೋಡೆಯಲ್ಲಿರುವ ಮೊಳೆ ತಗೊಂಡು....ದಲ್ಲಿ
ಚುಚ್ಚಿಕೊಂಡ" ಅಂತ. ಈ ಗಾದೆ ರಾಜಪುರೋಹಿತ ಸಾಹೇಬಗೆ ಅಕ್ಷರಶಃ
ಅನ್ವಯವಾಗುತ್ತದೆ.
ಅಂಕಿತಾ ಮಾಡಿದ್ದು ಏನು. ತಾ ವಾಸಿಸುತ್ತಿರುವ ಬಿಲ್ಡಿಂಗಿನ ಹೊರಗೆ ಇರುವ
ಪಾನಿಪುರಿ ಅಂಗಡಿಯವ ಹಾಡುಹಗಲಲ್ಲಿ ತನ್ನ ಗಾಡಿಯ ಕೆಳಗಡೆ ಶೆಲ್ಫನಲ್ಲಿಟ್ಟ
ಜಗ್ ನಲ್ಲಿ ಮೂತ್ರಹೊಯ್ಯುವುದನ್ನು ಅವಳು ಮೊಬೈಲಿನಲ್ಲಿ ಸೆರೆಹಿಡಿದಳು.
ಪಾನಿಪುರಿ ಅದನ್ನು ತಿಂದು ಆಗಬಹುದಾದ ಅಪಾಯಗಳನ್ನು ಪುಷ್ಟೀಕರಿಸಲು
ತಾ ತೆಗೆದ ವಿಡಿಯೋ ಸಹಾಯಆಗಬಹುದು ಇದು ಅವಳ ಹವಣಿಕೆ. ಅದೇ ಹಂಬಲ
ದಲ್ಲಿ ಅವಳು ವಿಡಿಯೋ ನೆಟನಲ್ಲಿ ಹರಿಬಿಟ್ಟಳು. ಈ ಶೂಟಿಂಗ್ ಪ್ರಕರಣದ
ಎರಡು ಮೂರುದಿನ ಮೊದಲು ರಾಜ್ ಠಾಕ್ರೆಯ ಪಾರ್ಟಿಯವರು ಮುಂಬೈಯ
ಭೇಲಪುರಿ,ಪಾನಿಪುರಿ ಅಂಗಡಿ ಹಾಗೂ ಅವನ್ನು ನಡೆಸಿಕೊಂಡು ಬರುತ್ತಿರುವ
ಅನಿವಾಸಿ ಮುಂಬೈಕರ್ ಮೇಲೆ ದಾಳಿ ನಡೆಸಿದ್ದರು. ವಿಡಿಯೋ ನೋಡಿ
ರಾಜಪುರೋಹಿತ ಆಡಿದ ಮಾತು ಅವರನ್ನು ಕೆರಳಿಸಿತು. ಪೋಲಿಸ್ ಠಾಣೆಯಲ್ಲಿ
ಅಂಕಿತ ದೂರು ದಾಖಲಿಸುವಾಗ ಅವಳ ಬೆಂಗಾವಲಾಗಿ ಮನಸೇ ಜನ ಇತ್ತು.
ಅಂಕಿತಾ ವಿಡಿಯೋಕ್ಕೆ ಈಗ ರಾಜಕೀಯ ಡಿಮಾಂಡು. ನಮ್ಮ ದೇಶದಲ್ಲಿ ಏನೇ
ಘಟನೆಯೂ ರಾಜಕೀಯಬಣ್ಣ ಬಳಿದುಕೊಳ್ಳುತ್ತೆ ಅನ್ನುವುದು ಮೇಲಿನ ಸಂಗತಿಯಿಂದ
ಮತ್ತೆ ಸಾಬೀತಾಗಿದೆ.
ಅನೇಕ ಪ್ರಶ್ನೆಗಳಿವೆ..
ರಾಜಪುರೋಹಿತ್ ಆಡಿದ್ದು ಸರೀನಾ ? ಅವಳು ಆ ರೀತಿ ವಿಡಿಯೋ ತೆಗೆದಳು ಅಂದ
ಮಾತ್ರಕ್ಕೆ ಅವಳು ಕೆಟ್ಟನಡತೆಯವಳು ಅಂತ ಸರ್ಟಿಫಿಕೀಟು ಕೊಡೋದು ಸರೀನಾ?
ಅಂಕಿತ ಯಾಕೆ ರಾಜಕೀಯದಾಳ ಆದಳು. ಪ್ರಸಿದ್ಧಿ ಸುಲಭವಾಗಿ ಸಿಕ್ಕಾಗ ಆದರ್ಶ
ಮಾಯವಾಗೋದ್ಯಾಕೆ?
ನಾವಿ ಇದೆಲ್ಲ ನೋಡಿಯೂ ಓದಿಯೂ ಮತ್ತೆ ಸಾಯಂಕಾಲ ಪಾನಿಪುರಿ ತಿನ್ನುವುದೇಕೆ?
ಉತ್ತರ ಬಲ್ಲವರು ಹೇಳರಿ.

2 ಕಾಮೆಂಟ್‌ಗಳು:

  1. ಛೇ ಛೇ! ಏನ್ರೀ ದೇಸಾಯರ, ಹಿಂಗೂ ಇರ್ತದನ? ನಮ್ಮ ಮಂದಿ ಯಾವ ಮಟ್ಟಕ್ಕ ಇಳದಾರಲ್ರಿ! Thank God, I do not eat pani puri! Anyway
    ಸಾರ್ವಜನಿಕ ಎಚ್ಚರಿಕೆ ಕೊಟ್ಟದ್ದಕ್ಕಾಗಿ ನಿಮಗ ಥ್ಯಾಂಕ್ಸ!

    ಪ್ರತ್ಯುತ್ತರಅಳಿಸಿ
  2. ಹಲವು ಜನರಿಗೆ ಆಹಾರ ಒದಗಿಸುವ ರಸ್ತೆ ಬದಿಯ ಮಂದಿಗೆ ಕೆಲವು ಕಾನೂನುಗಳನ್ನು ಅಳವಡಿಸಬೇಕು. ಇಲ್ಲದಿದ್ದಲ್ಲಿ ಮೂತ್ರವೊಂದೇ ಅಲ್ಲ ಇನ್ನೇನನ್ನೋ ಮಾಡಿ ಅದನ್ನೇ ಮಸಾಲ್ ಪೂರಿಗೆ ಬಳಸಬಹುದು! ಮಾಧ್ಯಮಗಳಲ್ಲಿ ನೋಡಿದಾಗ ಅಶಯವಾಗಿಬಿಟ್ಟಿತು, ಅಷ್ಟಾಗಿ ರಸ್ತೆಬದಿಯಲ್ಲಿ ನಾನು ಪಾನಿಪೂರಿ ತಿನ್ನುವುದಿಲ್ಲ; ಹೀಗಾಗಿ ವಾಂತಿಯಾಗಲಿಲ್ಲ ಅಷ್ಟೇ! ಸಕಾಲಿಕ ಎಚ್ಚರಿಕೆ

    ಪ್ರತ್ಯುತ್ತರಅಳಿಸಿ