ಭಾನುವಾರ, ಏಪ್ರಿಲ್ 3, 2011

ಗೋಲ್ ಕೀಪರ್ ನಿಂದ ವಿಶ್ವಕಪ್ ವರೆಗೆ...











ಹೌದು ಅವ ಮೊದಲು ಗೋಲ್ ಕೀಪರ್ . ಹಿಂದುಳಿದ ಜಾರ್ಖಂಡ್ ನಿಂದ ಬಂದವ ಇಂದು ಕೋಟಿ ಕೋಟಿ ಭಾರತೀಯರ ಆರಾಧ್ಯ ದೈವ.
ಬಹುಶಃ ಸಚಿನ್ ಬಿಟ್ಟರೆ ಜಾಹೀರಾತಿನಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವ ವ್ಯಕ್ತಿ ಅವ. ಅದೊ ಮೊಬೈಲ್ ನಿಂದ ಹಿಡಿದು ಸೀಲಿಂಗ್ ಫ್ಯಾನ್
ಜಾಹೀರಾತಾಗಿರಬಹುದು ಅಲ್ಲಿ ಅವ ಹಾಜರ್ರು. ನಿನ್ನೆ ನಡೆದ ಫೈನಲ್ ಅವನ ಉತ್ತುಂಗದ ಸೀಮೆ ಅಥವಾ ಇಂತಹ ಸೀಮೆಗಳೆ
ಉಲ್ಲಂಘನೆ ಮೇಲಿಂದ ಮೇಲೆ ಆಗುತ್ತಲೇ ಇರುತ್ತದೆ. ಅವನ ಹೆಸರು ಮಹೇಂದ್ರ ಸಿಂಗ್ ಧೋನಿ.
೨೦೦೩ರಲ್ಲಿ ಮುಂಬೈಯಲ್ಲಿ ಒಂದು ಸಾದಾ ಮ್ಯಾಚು ನಡೆದಿತ್ತು. ಭುಜದವರೆಗೆ ಕೂದಲಿದ್ದ ಒಬ್ಬ ಯುವಕ ಬಾರಿಸಿದ ಸಿಕ್ಸರ್ ಮೈದಾನದ
ಆಚೆ ಇರೋ ಗರವಾರೆ ಕ್ಲಬ್ ನ ಗಾಜು ಒಡೆದಿತ್ತು. ನೋಡಿದವರು ಬೆರಗಾಗೋ ವಿಭಿನ್ನ ವಿಚಿತ್ರ ಬ್ಯಾಟಿಂಗು. ಅವನ ಶೈಲಿ, ಧಿಮಾಕು
ಎಲ್ಲರ ಗಮನಸೆಳೆದಿತ್ತು. ಗೋಲಕೀಪರ್ ಆದ ಅನುಭವ ಬೇರೆ ಸಹಜವಾಗಿ ವಿಕೆಟ್ ಕೀಪರ್ ಆದ. ಆಕ್ರಮಣ ಅವನ ಅಸ್ತ್ರ.
ಆ ಅಸ್ತ್ರ ಬಳಕೆಯಾಗಿದ್ದು ಲಂಕಾ ವಿರುದ್ಧ ೧೮೩ ರನ್ ಚಚ್ಚಿದಾಗ. ಕ್ರಿಕೆಟ್ ಪಂಡಿತರು ಬೆರಗಾದರು ತಲೆದೂಗಿದರು. ಮಹೇಂದ್ರ ಧೋನಿ
ಮಾಹಿ ಯಾಗಿ ಹೆಸರುಗಳಿಸಿದ್ದು ಪಾಕ್ ಪ್ರವಾಸದಲ್ಲಿ. ಸ್ವತಃ ಮುಶ್ರಫ್ ಅವನ ಆಟ್ ಹಾಗೂ ಚಿಮ್ಮುವ ಕೂದಲಿಗೆ ಮೆಚ್ಚಿಗೆ ಸೂಸಿದ.
ಮಾಹಿಯ ಆಟ ಕುಸಿದಿದ್ದು ನಂತರ ಚೇತರಿಸಿಕೊಂಡಿದ್ದೂ ಇದೆ. ೨೦೦೭ ರ ವಿಶ್ವಕಪ್ ಸೋಲು ಹೊಸ ನಾಯಕನ ಹುಡುಕಾಟದಲ್ಲಿದ್ದಾಗ
ಕಂಡಿದ್ದು ಇವ.೨೦-೨೦ವಿಶ್ವಕಪ್ ನಾಯಕತ್ವ. ತರುಣರ ಪಡೆ ಕಟ್ಟಿಕೊಂಡು ಹೋರಾಡಿದ. ಪಾಕ್ ವಿರುದ್ಧ ಗೆಲುವು ಸಾಧಿಸಿ ಕಪ್ ಎತ್ತಿ
ಹಿಡಿದ. ೨೦೦೮ರ ಆಸಿಸ್ ವಿರುದ್ಧ ಒನ್ ಡೇ ಗಳಿಗೆ ನಾಯಕನಾದ. ನಾಯಕತ್ವದಲ್ಲಿ ಅನೇಕ ಜಯ ಮೂರು ಫೈನಲ್ ಪಂದ್ಯಗಳಲ್ಲಿ
ಎರಡನ್ನು ಗೆದ್ದು ಆ ನೆಲದಲ್ಲಿ ಗೆಲುವು ಸಾಧಿಸಿದ ಮೊದಲಿಗನಾಗಿ ಮೆರೆದ. ಇದಾದ ನಂತರ ಟೆಸ್ಟ್ ಟೀಮ್ ನಾಯಕತ್ವ. ಕೀಪಿಂಗ್ ಮಾಡುತ್ತ
ಬ್ಯಾಟ್ ಬೀಸುತ್ತ ಯೋಜನೆಗಳ ರೂಪಿಸುತ್ತ ಹೀಗೆ ಧೋನಿ ಸದಾಕಾಲ ಬಿಸಿ ಮನುಷ್ಯ.
ಈ ಮೊದಲಿನ ನಾಯಕ ಗಂಗೂಲಿ ಟೀಮನಲ್ಲಿ ಬೇಡ ಎಂದಾಗ ದೊಡ್ಡ ಗದ್ದಲವಾಗಿತ್ತು. ದಾದಾನ ದಾದಾಗಿರಿ ಮುಗಿಯಲು ಧೋನಿಯ
ನಿಲುವು ಕಾರಣ. ಈಗಲೂ ಹಿರಿಯರಾದ ಸಚಿನ್,ದ್ರಾವಿಡ್ ಮತ್ತು ವಿವಿಎಸ್ ತಂಡದಲ್ಲಿದ್ದಾರೆ. ಅವರ ಪಾಂಡಿತ್ಯಕ್ಕೆ ಅವ ಗೌರವಾನೂ ಕೊಟ್ಟಿದ್ದಾನೆ
ಹಾಗೆಯೇ ನಿರ್ಣಯ ಮಾತ್ರ ತನ್ನಬಳಿ ಇಟ್ಟುಕೊಂಡಿದ್ದಾನೆ. ಮಾಹಿಯ ನಿರ್ಣಯಗಳು instinct ಮೇಲೆ ಆಧಾರಿತ. ಅನೇಕ ಉದಾಹರಣೆಗಳಿವೆ
ಹಲವಾರು ಸಾರಿ ಅವು ಉಲ್ಟಾ ಆಗಿವೆ. ಆದರೆ ಧೋನಿ ಹಿಂದೆ ಸರಿದಿಲ್ಲ. ಈಗಂತೂ ಅವ ವಿಶ್ವ ವಿಜೇತ, ಮುಂದೆ ಇನ್ನೂ ಸಾಗಬೇಕಾಗಿದೆ
ಧೋನಿ ನಿಲ್ಲುವ ಆಸಾಮಿಯಂತೂ ಖಂಡಿತ ಅಲ್ಲ.

4 ಕಾಮೆಂಟ್‌ಗಳು:

  1. ನೀವು ಮಾಡಿದ ಧೋನಿಯ ವಿಶ್ಲೇಷಣೆ ನಿಖರವಾಗಿದೆ. ನಾನು ಹದಿನಾರಾಣೆ ಸೋಲಾ ಪೈ ಸಹಮತನಾಗಿದ್ದೇನೆ.

    ಪ್ರತ್ಯುತ್ತರಅಳಿಸಿ
  2. ದೇಸಾಯಿಯವರೆ...

    ಧೋನಿಯನ್ನು ಸರಿಯಾಗಿ ವಿಶ್ಲೇಶಿಸಿದ್ದೀರಿ... ಸಕಾಲಿಕ ಲೇಖನ...

    ಯುಗಾದಿ ಹಬ್ಬದ ಶುಭಾಶಯಗಳು...

    ಪ್ರತ್ಯುತ್ತರಅಳಿಸಿ
  3. ಯುಗಾದಿ ಹಬ್ಬದ ಶುಭಾಶಯಗಳು.... ನಿಜ ಧೋನಿ ಎಲ್ಲರ ಮನ ಗೆದಿದ್ದಾನೆ....

    ಪ್ರತ್ಯುತ್ತರಅಳಿಸಿ
  4. ಉಮೇಶ್ ಸರ್,

    ದೋನಿಯ ಬಗ್ಗೆ ಎಷ್ಟು ಬರೆದರೂ ಸಾಲದು ಎನ್ನುವಷ್ಟರ ಮಟ್ಟಿಗೆ ಆತ ಅದೃಷ್ಟವಂತ ಮಾತ್ರವಲ್ಲ ಪ್ರತಿಭಾವಂತ ಆಟಗಾರ-ನಾಯಕ. ಅವನ ನಿಮ್ಮ ಲೇಖನ ಚುಟುಕಾಗಿದ್ದರೂ ಚೆನ್ನಾಗಿದೆ...ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ