ಸೋಮವಾರ, ಏಪ್ರಿಲ್ 4, 2011

ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..

"ಸಮಾ" ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ---
""In my opinion, if I have to tell the truth, they (Indians) will never have hearts like Muslims and Pakistanis. I don't think they have the large and clean hearts that Allah has given us,"

ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ
ನುಡಿಯೋ ಅಥವಾ ಮನದಲ್ಲಿ ಮಥಿಸಿಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.
ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.
 ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ. ಆದರೆ ಒಳಗೆಲ್ಲೋ ಅವ ನಿಜ ಹೇಳುತ್ತಿರಬಹುದು ಎಂಬ ಒಂದು ಖುಷಿಯ ಅಲೆ ಮನದಲ್ಲಿ ಮೂಡಿರಲು ಸಾಕು.
 ಇರಬಹುದೇನೋ ಅವರಿಗೆ ಅತೃಪ್ತಿ ಅದು ಒಂಥರಾ ರೋಗ.
ಸವಲತ್ತುಗಳು ,ರಿಷುವತ್ತುಗಳು ಸಿಕ್ಕಷ್ಟು ಈ ರೋಗ ಉಲ್ಬಣಿಸುತ್ತದೆ.

ಈಗ ಅಫ್ರಿದಿ ಯ ಮಾತು ಆ ದೇಶದ ಈಗಿನ ನಿಲುವನ್ನು ಬಿಂಬಿಸುತ್ತವೆಯೇ ಅಥವಾ ಅದು ಹುಚ್ಚು ನಾಯಿಯ ಬೊಗಳುವಿಕೆಯೇ .ಅಫ್ರಿದಿ ಆ ದೇಶದ ಕ್ರಿಕೆಟ್ ತಂಡ ಮುನ್ನಡೆಸಿದವ. ಒಂದು ರೀತಿಯಲ್ಲಿ ಪ್ರತಿನಿಧಿ ಅವ.
ಹೀಗಿರುವಾಗ ಅವನ ಪ್ರಲಾಪ ಕೇವಲ ವೈಯುಕ್ತಿಕ ಅದು ಪಾಕ್ ಅಥವಾ ಒಟ್ಟಾರೇ ಮುಸಲ್ಮಾನರ ನಿಲುವು ಆಗಲು
ಸಾಧ್ಯನೇ ಇಲ್ಲ ಹೀಗೊಂದು ವಾದ ಏಳಬಹುದು. ಈ ವಾದ ನಾ ಒಪ್ಪುತ್ತೇನೆ ಆದರೆ ಹುಚ್ಚುನಾಯಿಗೆ ಕಲ್ಲೆಸೆಯಬೇಕು
ಹೊರತು ರೊಟ್ಟಿ ನೀಡಬಾರದು. ಆ ದೇಶದ ಪ್ರಧಾನಿಯಾಗಲಿ. ನಾಯಕರಾಗಲಿ ಅವನ ಮಾತು ಖಂಡಿಸಲೇ ಇಲ್ಲ.
ಅವ ನಿಜಾನೇ ಹೇಳುತ್ತಿರುವುದು ಎಂದು "ಆಫ್ ದಿ ರಿಕಾರ್ಡ" ಹೇಳುತ್ತಿರಬಹುದು. ಪಾಕಿಸ್ತಾನ ಯಾವಾಗಿದ್ದರೂ
ನಮಗೆ ಮಗ್ಗುಲ ಮುಳ್ಳು. ಆಗಾಗ ಚುಚ್ಚುತ್ತದೆ. ಇದು ನಿಜ.

ನಮ್ಮ ರಾಜತಾಂತ್ರಿಕತೆ ಇಷ್ಟು ಕೆಳಮಟ್ಟ ಕಂಡಿತೇಕೆ ಗೊತ್ತಾಗುತ್ತಿಲ್ಲ. ಮ್ಯಾಚಿನ ನೆವ ಮಾಡಿ ಗಿಲಾನಿಯನ್ನು
ಆಹ್ವಾನಿಸಿ ಅವನಿಗೆ ಉಣಬಡಿಸಿದೆವು. ಹೊಸ ಹೆಜ್ಜೆ ಎಂದು ಕೇಂದ್ರ ಸರಕಾರ ಹೇಳಿಕೊಂಡೀತು. ಯಾವಾಗಾವಾಗ
ನಾವು ಅವರೆಡೆಗೆ ಕೈ ಚಾಚಿದಾಗ ನಮಗೆ ಸಿಕ್ಕಿದ್ದು ಕಾರ್ಗಿಲ್,೨೬/೧೧ ಈಗ ಅಫ್ರಿದಿಯ ಈ ಮಾತುಗಳು.
ಮೀಡಿಯಾದ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಈ ತಂತ್ರ ಹೂಡಿದರು ಅನಿಸುತ್ತದೆ. ಆದರೆ ಅದು ತಿರುಗುಬಾಣವಾಗಿದೆ ಅಫ್ರಿದಿಯ ಈ ಮಾತಿನಲ್ಲಿ. ಗಿಲಾನಿ ಬಂದ ಕೈ ಕುಲುಕಿದ ಪೊಗದಸ್ತಾಗಿ ಉಂಡ ಅಲ್ಲಿ ಹೋದ
ಎಲ್ಲ ಮರೆತ. ಇದು ಕೇಂದ್ರದ ಕಣ್ಣು ತೆರೆಸಿತೆ ನೋಡಬೇಕು.

ಅಫ್ರಿದಿಯ ಮಾತು ನನ್ನ ಅನಿಸಿಕೆ ಬಜ್ ನಲ್ಲಿ ಹಾಕಿದ್ದೆ. ಅನೇಕ ಜನ ಪ್ರತಿಕ್ರಿಯಿಸಿದರು. ಆಜಾದ್ ಭಾಯಿ ನಾ ಅವರಿಗೆ
ನೋವುಂಟು ಮಾಡಿದೆ ಎಂದು ಗೂಬೆ ಕೂರಿಸಿದರು. ಆದರೆ ಸತ್ಯ ಏನು ಅವರಿಗೂ ಗೊತ್ತು. ಅದನ್ನು ಒಪ್ಪಿಕೊಳ್ಳುವ
ಅಫ್ರಿದಿಯ ಮಾತು ನಮ್ಮ ಸಮುದಾಯದ್ದಲ್ಲ ಅಂತ ಹೇಳಬೇಕಾಗಿತ್ತು. ಮಾತು ಮರೆಸಿ ಅದೇ ಊಟ, ವಿನೋದ ಹೀಗೆ
ಮಾತು ಬದಲಿಸಿದರು. ಹೇಳುವುದಿಷ್ಟೇ  ಅಫ್ರಿದಿಯ ಮಾತು ವೈಯುಕ್ತಿಕ ಆಗೊಲ್ಲ ಅವನಿಗೆ ಅಲ್ಲಿ ಬೆಂಬಲವಿದೆ ಅವನ
ನಿಲುವು ಅಲ್ಲಿಯ ಜನರ ಭಾವನೆ ಬಿಂಬಿಸುತ್ತದೆ. ಇಂಥಾ ದೇಶದ ಜೊತೆ ಮತ್ತೆ ಮಾತು ಆಡುವ ಹುಂಬತನ ನಮಗೆ
ಬೇಡ ಅಲ್ಲವೇ....!

2 ಕಾಮೆಂಟ್‌ಗಳು:

  1. ಪಾಕಿಸ್ತಾನದ ಜನನವೇ ತಿಕ್ಕಲುತನದಲ್ಲಿ ಆಗಿದೆ. ಅಲ್ಲಿಯವರಿಗೆ ಭಾರತ-ದ್ವೇಷ ಹುಟ್ಟುಗುಣ. ಇದನ್ನು ಎಲ್ಲ ಭಾರತೀಯರು ಅರ್ಥ ಮಾಡಿಕೊಳ್ಳಬೇಕು. ದುರ್ದೈವದಿಂದ ನಮ್ಮವರೂ ಸಹ ಪಾಕಿಸ್ತಾನೀಯರಂತೆಯೇ ಮಾತನಾಡುತ್ತಾರೆ. ಅಝರುದ್ದೀನನ ಮೇಲೆ match fixing ಆಪಾದನೆ ಬಂದಾಗ ‘ನಾನು ಅಲ್ಪಸಂಖ್ಯಾಕನಾದದ್ದರಿಂದಲೇ ಈ ಆಪಾದನೆ’ ಎಂದು ಬೊಗಳಿದ ಆ ಮಹಾಶಯನನ್ನು ನಮ್ಮವರೇ ಲೋಕಸಭೆಯ ಸದಸ್ಯನನ್ನಾಗಿ ಮಾಡಿದರು!

    ಪ್ರತ್ಯುತ್ತರಅಳಿಸಿ
  2. ನಲ್ಮೆಯ ಗೆಳೆಯ ಉಮೇಶ್ ಸರ್....ನನ್ನ ಹೆಸರನ್ನ ಇಲ್ಲಿ ಪ್ರಸ್ತಾಪಿಸಿದ್ದೀರಿ ಆದ್ದರಿಂದ ಕಾಮೆಂಟ್ ಹಾಕಲೇ ಬೇಕು...ಪಾಕಿಸ್ತಾನ ಏನು ಮಾಡುತ್ತಿದೆ ಎಲ್ಲರಿಗೂ ಗೊತ್ತು..ಕಸಬನಂಥವರ ಪ್ರಾಯೋಜಿತ ಆತಂಕವಾದ ನಡೆಸಿರೋದೂ ಸರ್ವ ಸಿದ್ಧ... ಮೂಂಬೈ ಹತ್ಯಾಕಾಂಡದ ನಂತರ ನನ್ನ ಬ್ಲಾಗಿನಲ್ಲೂ ಇದನ್ನು ಖಂಡಿಸಿದ್ದೇನೆ,ಅಲ್ಲದೇ ಬಜ್ ನಲ್ಲಿ ಅವನ ಒಬ್ಬನ ಮಾತನ್ನು ಇಲ್ಲಿರುವ ಎಲ್ಲಾರಿಗೂ ಅನ್ವಯಿಸುವಂತೆ ಹೇಳುವುದೂ ಸರಿಯಲ್ಲ ಎಂದಿದ್ದೇನೆ. ಹಾಗಾಗಿ ಅಲ್ಲಿಯವನ ಮಾತಿಗೆ ಇಲ್ಲಿ ಇರುವವರೂ ಎಲ್ಲಾ (ನನ್ನ ಹೊರತು ಪಡಿಸಿ ಅಂತ ನೀವು ಹೇಳಿದಿರಿ..ಇದು ಎಷ್ಟು ನಿಜ ?? ನಾನೇ ಪ್ರಶ್ನಿಸಿಕೊಳ್ಳಬೇಕು..ಏಕೆಂದರೆ ನಮ್ಮ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ, ಹಲವಾರು ಚಿಂತಕ ದೇಶಪ್ರೇಮಿಗಳಿರುವಾಗ...!!!!) ಮುಸ್ಲಿಮರೂ ಅಫ್ರೀದಿಯಂತಹವರು ಎನ್ನುವುದು ಸರಿಯಲ್ಲ ಎಂದಿದ್ದೆ..ಅಷ್ಟೇ... ಅವನ ಮಾತನ್ನು ನಾನೂ ಹೀಗಳೆಯುತ್ತೇನೆ..ನಮ್ಮನ್ನು ಹೀಗೆ ದೇಶದಿಂದ ಬೇರ್ಪಡಿಸಿ ಮಾತನಾಡುವುದು ಅವನಿಗೆ ತರವಲ್ಲ..., ಮತ್ತೊಮ್ಮೆ ನನ್ನ ಮಾತಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ...

    ಪ್ರತ್ಯುತ್ತರಅಳಿಸಿ