ಭಾನುವಾರ, ಜೂನ್ 19, 2011

ಇದರ ಕತೆ ಇಷ್ಟೇ ಕಣಪ್ಪೋ....









ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ
ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು
ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ
ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ
ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು
ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಹಾಲಿ ನಮ್ಮ ಸಿಎಮ್ಮು
ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ
ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನ
ಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ
ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ
ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ.
ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ.ನನಗೆ
ಕುತೂಹಲ ಇರೋದು ಆ ರಕ್ತದ ಬಣ್ಣದ ಬಗ್ಗೆ...! ನಂಜು ನುಂಗಿ ಅದ ಉಗುಳಿದವರ ರಕ್ತ
ಕೆಂಪಗಿರಲು ಹೇಗೆ ಸಾಧ್ಯ??
ಯಾಕೆ ಹೀಗಾಗುತ್ತಿದೆ ಅಂತ ಯಾವುದೇ ಶ್ರೀ ಸಾಮಾನ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ
ತನ್ನ ಸುತ್ತಲಿನ ತನ್ನ ಕವಿದಿರುವ ಸಮಸ್ಯೆಗಳ ಬೆಂಕಿಗೆ ಅವ ಮೈಯೊಡ್ಡಿ ಹಿತ ಅನುಭವಿಸುತ್ತಿದ್ದಾನೆ
ಆದರೆ ಮೀಡಿಯಾದವರ ಹೊಟ್ಟೆ ಹಸಿವು ಅಗಾಧ ಹಿತ ಅನುಭವಿಸಲು ಬಿಟ್ಟರೆ ಅವರು ಉಸಿರಾಡುವುದು
ಹೇಗೆ ಅದಕ್ಕೇ ಅವರು ಅವನನ್ನು ತಿವಿದು ಎಚ್ಚರಿಸಿ ೨೭/೦೬/೨೦೧೧ ರಂದು ನಡೆಯಲಿರುವ ಆಣೆಪ್ರಕರಣ
ದ ಬಗ್ಗೆ ಅಭಿಪ್ರಾಯ ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಲಿ ಮಾಜಿ ಕದನ ಇತಿಹಾಸದಲ್ಲಿ
ಮೊದಲ ಬಾರಿ ಆಗುತ್ತಿರುವುದು ಹೀಗಾಗಿ ಇದನ್ನು ಕವರ್ ಮಾಡಲು ಪುಡಿಹುಡಿ ಚಾನಲ್ ಗಳಲ್ಲದೇ
ಫಾಕ್ಸ್, ಸಿಎನ್ ಎನ್ ಹಾಗೂ ಬಿಬಿಸಿ ಯವರು ಬರಲಿದ್ದಾರೆ. ಈಗಾಗಲೇ ಧರ್ಮಸ್ಥಳದ ಲಾಜ್ ಎಲ್ಲ
ಬುಕ್ ಆಗಿವೆ. ಇದೇ ಸಂಧರ್ಭ ಲಾಭಮಾಡಿಕೊಳ್ಳಲು ಶ್ರೀ ಕ್ಷೇತ್ರದ ಸುತ್ತಲಿನ ಯಾತ್ರಾಸ್ಥಳದವರೂ
ತಮ್ಮ ತಮ್ಮ ದೇವರ ದರ್ಶನ ದ ರೇಟು ಕಮ್ಮಿ ಮಾಡಿಕೊಂಡು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ೨೭/೦೬/೧೧ ರಂದು ನಡೆಯಲಿರುವ ಐತಿಹಾಸಿಕ ದಿನದ ಪೂರ್ವ ಮಾಹಿತಿ ಎಲ್ಲರಿಗಿಂತ
ಮೊದಲೇ ಎಕ್ಸಕ್ಲೂಸಿವ್ ಆಗಿ ನೀಡಿದ ಈ ಬ್ಲಾಗಿನ ಟಿಆರ್ ಪಿ ಹೆಚ್ಚಿಗೆಯಾಗಲಿದೆ.ಇದು ಸತ್ಯ ಈ

ಬಗ್ಗೆ ನಾನೂ ಬೇಕಾದರೆ ಆಣೆ ಮಾಡಿ ನಿರೂಪಿಸಿಯೇನು.....!!!

7 ಕಾಮೆಂಟ್‌ಗಳು:

  1. ಸ್ವ ಪ್ರತಿಷ್ಟೆ ಆಣೆಗಳಿಗಿಂತ.. "ನಾನು ಜನರ ಹಣ ತಿಂದಿಲ್ಲ" ಅಂತ ಆಣೆ ಮಾಡ ಬಹುದಾ?

    ಪ್ರತ್ಯುತ್ತರಅಳಿಸಿ
  2. ಒಂದು ಅಪೂರ್ವ ದೃಶ್ಯದ ಪೂರ್ವಭಾವಿ ನೋಟವನ್ನು ಒದಗಿಸಿದ ನಿಮಗೆ ಧನ್ಯವಾದಗಳು. (ಮಂಜುನಾಥನ ಹರಕೆಯಿಂದ ನಿಮ್ಮ TRP ಖಂಡಿತವಾಗಿಯೂ ಮೇಲೇರಲಿದೆ.)

    ಪ್ರತ್ಯುತ್ತರಅಳಿಸಿ
  3. ಹಹಹ ನಿಮ್ಮ ಬ್ಲಾಗಿನ ಟಿ ಆರ್ ಪಿ ಹೆಚ್ಚಾಗಲೆಂದು ಆ ಮಂಜುನಾಥನಲ್ಲಿ ಪ್ರಾರ್ಥಿಸುವೆ. ಸರ್ ಇತ್ತೀಚೆಗೆ ಕನ್ನಡ ನ್ಯೂಸ್ ನೋಡಲೇ ಬೇಜಾರು ಅರ್ಧ ಘಂಟೆಯಲ್ಲಿ ಅರ್ಧ ಇವರುಗಳದೇ ವಿಚಾರ ಬೇರೇನು ಇಲ್ಲ...

    ಪ್ರತ್ಯುತ್ತರಅಳಿಸಿ
  4. ಈ ಸುದ್ದಿಗಳನ್ನೆಲ್ಲಾ ಓದಲು ಸಮಯ ಸಾಕಾಗುತ್ತಿಲ್ಲ ಎನ್ನುವುದಕ್ಕಿ೦ತಲೂ ಆಸಕ್ತಿಯು೦ಟಾಗುತ್ತಿಲ್ಲ ಎನ್ನಬಹುದು. ಅದೇ ಕಿತ್ತಾಟ! ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. ಉಮೇಶ್ ಸರ್..ಇವರ ಹಗ್ಗ ಜಗ್ಗಾಟ ಜನಜೀವನದ ಜಂಜಾಟ..ಅಂತೂ ಕರ್ನಾಟಕ ಎಲ್ಲೆಲ್ಲೂ ನಗೆ ಪಾಟಲಿಗೆ ಈಡಾಗ್ತಿದೆ ಇದೇ ವಿಶಾದ....

    ಪ್ರತ್ಯುತ್ತರಅಳಿಸಿ
  6. ಇಲ್ಲಿ ತನಕ ನು ಯಾರು ಸತ್ತಿದ್ದು ಸುದ್ದಿ ಬಂದಿಲ್ಲ ನೋಡಿ. :( ಇದು ದೊಡ್ಡ ದುರಂತ ಅಲ್ವ?

    ಪ್ರತ್ಯುತ್ತರಅಳಿಸಿ
  7. ಸುನಾಥರು ಹೇಳಿದಹಾಗೇ ಒಂದು ಪೂರ್ವನೋಟವನ್ನು ಕರುಣಿಸಿದ್ದೀರಿ, ನಿಮ್ಮ ಟಿ.ಆರ್.ಪಿ ಏರುತ್ತಾ ಇದೆ ಎಂಬುದು ತುಸು ತಡವಾಗಿ ಬಂದ ನನಗಂತೂ ಅನಿಸುತ್ತಿದೆ.

    ಪ್ರತ್ಯುತ್ತರಅಳಿಸಿ