ಬುಧವಾರ, ಫೆಬ್ರವರಿ 29, 2012

ಕತ್ತಿ ಕತೆ..

ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..
ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..
ಹಿಂದಿರುವ ನೊಣ , ಕಾವಿ ಧರಿಸಿತ್ತು
ಗುಂಯ್ಗುಡುತ್ತಿತ್ತು...
ವಂಧಿಮಾಗಧರ ಬೋ ಪರಾಕು
ನಿಕಟಪೂರ್ವ ದೊರೆಯ ಮುಖದತುಂಬ
ಕವಿದ ಕಾರ್ಮೋಡ..
ಜಾತಿ ಒಂದೇ ವಲಂ ಎಂದು ಬಡಬಡಿಸಿದವನ
ಮುಖ ಸಪ್ಪೆ.. ಅಂತೆಯೇ ಆ ಕತ್ತಿ ನಾಲಿಗೆಗೆ
ಇಳಿದಿತ್ತು..
ಅವರೇನೋ ಕುರುಡರು ..ಚೂರಿ ಅಲಗನ್ನು
ಗುರುತಿಸಲಿಲ್ಲ... ನಾವು ನೀವು
ಕಣ್ಣಿದ್ದವರು..ಅದೆಷ್ಟೋ ಚೂರಿಗಳು ನಮ್ಮೆದೆ
ಎದೆಬಗೆದು ನೆತ್ತರ ಉಂಡರೂ ಮುಖದಿಂದಿನ್ನೂ
ಚೀತ್ಕಾರ ಬಂದಿಲ್ಲ..
ಈ ಕಾವಿ, ಖಾದಿಯ ನಡುವೆ ನಮ್ಮ ಬದುಕು
ಬರಡಾಯಿತಲ್ಲ....!!

3 ಕಾಮೆಂಟ್‌ಗಳು:

 1. ತಮ್ಮ ಜನ್ಮದಿನದಂದು ಕೇಕ್ ಕತ್ತರಿಸಿದ ಚಾಕುವಿನಿಂದಲೇ ಅಂಧ ಬಾಲಕನೊಬ್ಬನ ಬಾಯಿಗೆ ಕೇಕ್ ಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿಗಳ ಫೋಟೋ ನೋಡಿದ್ದೆ. ಅದು ನಿಮ್ಮ ಕವಿತೆಯ ಹಿನ್ನೆಲೆಯಾದರೂ ಒಟ್ಟು ನಾವು ಇಂದು ಬದುಕುತ್ತಿರುವ ಸನ್ನಿವೇಶದ ವಾಸ್ತವವನ್ನು ಸರಳವಾಗಿ ಹಿಡಿಯಲೆತ್ನಿಸಿದ ಈ ಕವಿತೆಯ ವಿಷಾದ ಅದನ್ನು ಮೀರಿದ್ದಾಗಿದೆ.ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 2. ವಿಡಂಬನೆ ಕತ್ತಿಯಂತೆಯೇ ಹರಿತವಾಗಿದೆ. ಆದರೆ ನಾವು ಕುರುಡರಷ್ಟೇ ಅಲ್ಲ, ಅಪಾಂಗರೂ ಹೌದು!

  ಪ್ರತ್ಯುತ್ತರಅಳಿಸಿ
 3. ಹಿಂದಿರುವ ನೊಣ , ಕಾವಿ ಧರಿಸಿತ್ತು..... nijakkoo aa noNagaLige holisoku besaravaagutte Umesh. Ninne ondu video nodthidde Who Is An Idiot antha? naavo namma raajakaranigaLo antha - uttara aspashta.....
  kavanada aashaya - shaili ishtavaaythu :)

  ಪ್ರತ್ಯುತ್ತರಅಳಿಸಿ