ಶನಿವಾರ, ಜನವರಿ 29, 2011

ಮೊದಲಿಗೆ....


ಇದು ಇನ್ನೊಂದು ಪ್ರಯತ್ನ. ಈಗಾಗಲೇ ಘಟಾನುಘಟಿಗಳಾದ ಮಾಜಿ ಲೇಖಕರು,ಸಂಪಾದಕರು, ಜಲನೀರು ತಂತ್ರಜ್ನರು ಈ ಬ್ಲಾಗ್ ಲೋಕಕ್ಕೆ ಬಂದಿದ್ದಾರೆ. ಅವರೇ ಹೇಳುವ ಹಾಗೆ ಅವರ ಈ ಪ್ರಯತ್ನಗಳಿಗೆಅಭೂತಪೂರ್ವ
ಪ್ರತಿಕ್ರಿಯೆಯೂ ದೊರೆತಿದೆ. ಬ್ಲಾಗ್ ಲೋಕದಲ್ಲಿ ಅದಾಗಲೇ ಅವರ ವಿಜಯ ಪತಾಕೆ ಹಾರುತ್ತಿದೆಯಂತೆ.ಅವರಿಗೆ
ಅಭಿನಂದನೆಗಳು. ಅವರ ಪ್ರಯತ್ನದಲ್ಲಿ ಯಶ ಸಿಗಲಿ. ಆದರೆ ಒಂದಾನೊಂದು ಕಾಲದ ಪರಮಾಪ್ತ ಮತ್ತು ಈಗಿನ
ಪತ್ರಿಕೆಯ ಸಂಪಾದಕನನ್ನೇ ಗುರಿಯಾಗಿಸಿ ಇವರು ಬರೆಯುತ್ತಿರುವ ಹಾಗಿದೆ. ಅವರ ಜಗಳ ಈ ಬ್ಲಾಗ್ ಜಗತ್ತಿಗೆ ತಂದು ನಿಧಾನವಾಗಿ ಈ ಬ್ಲಾಗ್ ಲೋಕ ಹೊಲಸುಮಾಡುತ್ತಿದ್ದಾರೆ...!
ಈಗಲೇ ಅನೇಕ ದ್ವಂದ್ವ ,ಹತಾಶೆ ನಿರಾಸೆಗಳಿಂದ  ಬ್ಲಾಗಿಗರು ಬಳಲಿದ್ದಾರೆ
ಈ ಮಹನೀಯರ ಕೋಳಿ ಜಗಳ ಯಾರಿಗೆ ಬೇಕು...?

ಎಲ್ಲಿ ಸುತ್ತಿದರೂ ಅಲ್ಲೇ ಗಿರಕಿ ಹೊಡೆಯುತ್ತದೆ. ಅದೇ ಯಶವಂತನ ದುರಂತ ಸಾವು. ಆರೋಪಿ ಪೋಪಟ್ ಶಿಂಧೆ ಇನ್ನು  ಜೀವನ್ಮರಣದ ಹೋರಾಟದಲ್ಲಿದ್ದಾನೆ. ಅವನಿಗೆ ೨೦೦೬ ರಲ್ಲಿಯೇ ನಾಸಿಕ್ ನಿಂದ
 ತಡೀಪಾರ್ ಆದೇಶ ಹೊರಡಿಸಲಾಗಿತ್ತು. ಆದರೂ ೨೫/೦೧/೨೦೧೧ ರ ವರೆಗೂ ಅಲ್ಲಿಯೇ ಠಿಕಾಣಿ ಹೂಡಿದ್ದ. ಇಂದು ಮಹಾರಾಷ್ಟ್ರ ಸುತ್ತುತ್ತಿರುವ ರಾಹುಲ್ ಒಂದು ಅಣಿಮುತ್ತು ಉದುರಿಸಿದ್ದಾನೆ. ನೈತಿಕತೆ ಯಾವ ಪಾರ್ಟಿಯಲ್ಲಿಯೂ ಉಳಿದಿಲ್ಲ ಅಂತ.  ಎದೆಗಾರಿಕೆಯ ಮಾತು ಅನ್ನೋಣವೇ...?
ಸ್ವತಃ ಕಾಂಗ್ರೆಸ್ ನಿತ್ರಾಣವಾಗಿದೆ.ಕೋಟಿ ನುಂಗಿದ ಸ್ಪೆಕ್ಟ್ರಮ್, ಸ್ವಿಸ್ ಬ್ಯಾಂಕಿನ ಖಾತೆಯ ಭೂತ, ಸುಪ್ರೀಮ್ ಕೋರ್ಟ್ ಕಿರಿಕಿರಿ ಮೇಲಾಗಿ ಬ್ಯಾಟು ಹಿಡಿದೇ ನೇಗಿಲಾನೂ ಹೂಳ್ತೇನಿ ಅನ್ನೋ ಶರದ್ ಪವಾರ್ ಎಲ್ಲರನ್ನು ಸಂಭಾಳಿಸುವುದು ಮನಮೋಹನ್ ಸಾಹೇಬ್ರಿಗೇನು ಸೋನಿಯಾ ಮೇಡಂಗೂ
ಇಕ್ಕಟ್ಟಾಗ್ತಿತ್ತು. ಹೀಗಂತೆಯೇ ಅದು ಒಂದು ಜಾಣದಾರಿ ಅನುಸರಿಸಿದೆ. ಅವರ ಕಡೆ ದಿಗ್ವಿಜಯ್ ಅನ್ನೋ ಆಸಾಮಿ ಅದೆ. ಅದು ಆವಾಗಾವಾಗ ಬಾಯಿತೆರೆಯುತ್ತೆ ಏನೇನೋ ಹೇಳುತ್ತೆ. ಸ್ವಲ್ಪದಿನ ಮಿಡೀಯಾ ಮಂದಿ ಅವ ಹೇಳಿದ್ದನ್ನೇ
ಪುಂಗಿ ಊದ್ತಾರೆ .ಅವನ ಹೇಳಿಕೆಗಳೂ ಬಿಜೆಪಿ, ಸಂಘಪರಿವಾರದ ವಿರುದ್ಧ ಅಂತ ಪ್ರಚಾರ ಗ್ಯಾರಂಟಿ ಸಿಗ್ತವೆ.
ಇತ್ತೀಚೆಗೆ ಆತ ಸಾವರಕರ್ ಮೇಲೆ ಅಪವಾದ ಹೊರಿಸಿದಾನೆ. ಹಿಂದೆ ಕರ್ಕರೆ ಫೋನು ಮಾಡಿದ್ರು ಅಂತ ಹೇಳಿದ
ಹೀಗೆ ಹಾಲಿ ಇಲ್ಲದವರನ್ನು ಅದೇಕೆ ಈತ ಬಳಸಿಕೊಳ್ತಾನೋ ಗೊತ್ತಿಲ್ಲ.

ಈಡನ್ ಗಾರ್ಡನ್ ನಲ್ಲಿ ಆಡದಿದ್ದುದು ಬ್ರಾಡ್ ಗೆ ನಿರಾಸೆಮೂಡಿಸಿದೆಯಂತೆ. ನಿಜವೇನೇ ಇರಲಿ ಇದರಲ್ಲಿ ಬೋರ್ಡು ಹಾಗೂ ದಾಲ್ಮಿಯಾರ ತಿಕ್ಕಾಟವೂ ಕಾರಣವೇ ಗೊತ್ತಿಲ್ಲ. ಅಂತೂ ವಿಶ್ವಕಪ್ ಜ್ವರ ಏರುತ್ತಿದೆ.ಇಂದು ಅಫ್ರಿದಿ ಆಡಿದ
ಅದ್ಭುತ ಆಟ ನೋಡಿದ್ರೆ ಪಾಕ್ ಈ ವಿಶ್ವಕಪ್ಪಿನ  "ಕಪ್ಪುಕುದುರೆ" ಅಂತ ಅನುಮಾನ ಬರುತ್ತಿದೆ.

6 ಕಾಮೆಂಟ್‌ಗಳು:

 1. ವಾವ್ ಉಮೇಶ್ ಸರ್ ಒಳ್ಲೆಯ ನೀರು ಇಳಿಸುವ ಲೇಖನ ನಮ್ಮ ಸರ್ಕಾರಗಳಿಗೆ ಕಳುಹಿಸಬೇಕು ಇದನ್ನ......
  ಅಧಿ-ಖಾರ, ಅರಾಜ-ಕಾರಣಿ ದೇಶವನ್ನ ಎಕ್ಕುಟ್ಟಿಸ್ತಾ ಇದ್ದಾರೆ....ಜೈ ಹೋ...

  ಪ್ರತ್ಯುತ್ತರಅಳಿಸಿ
 2. ದೇಸಾಯ ಸರ ನೀವು ಹೇಳಿದ್ದರಲ್ಲಿ ಖರೇ ಅದ. ಇತ್ತೀಚೆಗೆ ಬ್ಲಾಗಿಗರ ಬರಹಗಳ ವೈಖರೀ ಮರೆಯಲ್ಲೇ ನೋಡಿ ಹಲವು ಸಂಪಾದಕರುಗಳು ಮಾಜಿಗಳು ಬ್ಲಾಗ್ ತೆರೆದಾರ. ಖಾತೆ ತೆರೆಯಲು ದುಡ್ಡೇನೂ ಬೇಡಲ್ಲ?-ಹೀಗಾಗಿ. ಅದ್ಕಾ ನಾವೇನ್ ಮಾಡ್ಬೇಕಪಾಂತಂದ್ರ ಅಂತಹ ಬ್ಲಾಗುಗಳನ್ನು ಓದಿದರೂ ಓದದೇ ಇದ್ದ ಹಾಗಿರಬ್ಕೇಕು, ನಿಮ್ಮ ಹೊಸ ಬ್ಲಾಗಿಗೆ ಶುಭಕೋರೀನಿ, ಶರಣು.

  ಪ್ರತ್ಯುತ್ತರಅಳಿಸಿ
 3. ದೇಸಾಯರ,
  ‘ವರ್ತಮಾನ’ದ ಮೊದಲ ಲೇಖನ ಓದಿ ಭಾರಿ ಖುಶಿ ಆತು. ಯಾವುದೇ ಸಮಾಚಾರ ಪತ್ರಿಕೆಯ ಸಂಪಾದಕೀಯಕ್ಕಿಂತ ನಿಮ್ಮ್ಮ ಲೇಖನ ಹೆಚ್ಚಿಗೆ ಸಕಾಲಿಕ,ಸಮಂಜಸ ಹಾಗು ಸಮರ್ಪಕ ಅದ.
  ಮತ್ತ ನಿಮ್ಮ ಶೈಲಿ ಹ್ಯಾಂಗ ಅದ ಅಂದರ ಎದುರಿಗೆ ಕೂತುಕೊಂಡು ಮಾತಾಡಿದ್ಹಂಗ ಅನಸ್ತದ. ನಿಮಗ ನನ್ನ ಹಾರ್ದಿಕ ಅಭಿನಂದನೆಗಳು. ನಿಮ್ಮಿಂದ ಇನ್ನಿಷ್ಟು ನಿರೀಕ್ಷಾ ಇತ್ತುಕೊಂಡೇನಿ.
  -ಕಾಕಾ

  ಪ್ರತ್ಯುತ್ತರಅಳಿಸಿ
 4. ಆಜಾದ್ ಭಾಯಿ ನನ್ನ ಹೊಸಾಬ್ಲಾಗಿಗೆಬಂದ ಮೊದಲ ಕಾಮೆಂಟೇ ನಿಮ್ಮದು,ಖುಷಿಆತು ನಿಮ್ಮ ಪ್ರೋತ್ಸಾಹ ನೋಡಿ.
  ಬರಕೊತ ಇರ್ರಿ.

  ಪ್ರತ್ಯುತ್ತರಅಳಿಸಿ
 5. ಭಟ್ ಸರ್ ಧನ್ಯವಾದಗಳು.ನಿಮ್ಮ ದೇಸಿ ಮಾತು ಆ ದರವೇಸಿಗಳ ಕಿವಿಗೆ ತಲುಪ್ಲಿ ಅಂತ ಹಾರೈಸುವೆ,

  ಪ್ರತ್ಯುತ್ತರಅಳಿಸಿ
 6. ಕಾಕಾ ಧನ್ಯವಾದಗಳು. ನಿಮ್ಮ ಹೊಗಳಿಕೆಗೆ ನಾ ಎಷ್ಟು ಯೋಗ್ಯ ಗೊತ್ತಿಲ್ಲ. ಈಗ ನೀವು ಬಂದ್ರಿ ಅಂದರ ಈ ಬ್ಲಾಗಿಗೆ
  ಕಳೆ ಬಂತು ನೋಡ್ರಿ. ಆಗಾಗ ಬರ್ರಿ....

  ಪ್ರತ್ಯುತ್ತರಅಳಿಸಿ