ಶುಕ್ರವಾರ, ಫೆಬ್ರವರಿ 11, 2011

ಆರುಷಿ--ಕೊಲೆ--ನಿರುತ್ತರ

ಸಾಲೆಯಲ್ಲಿ ಓದಿದ ನೆನಪು--ಮೂರು ಪದಗಳು-ಕಾರ್ಯಾಂಗ,ಶಾಸಕಾಂಗ,ನ್ಯಾಯಾಂಗ. ಈ ಅಂಗಗಳ ಪೈಕಿ
ನಮ್ಮ ದೇಶದಲ್ಲಿ ಕ್ರಿಯಾಶೀಲವಾಗಿರುವುದು ನ್ಯಾಯಾಂಗ ಮಾತ್ರ. ಇತ್ತೀಚಿನ ದಿನಗಳಲ್ಲಿ ಅದು ಪದೇ ಪದೇ
ಸರಕಾರದ ಕಿವಿ ಹಿಂಡುತ್ತಿದೆ. ಅದು ಅಶೋಕ್ ಚವಾಃಣ್ ಗೆ ಕೊಟ್ಟ ಮಂತ್ರಿಗಿರಿಯೇ ಆಗಿರಲಿ,ಕಪ್ಪುಹಣದ ವಿಚಾರವಿರಲಿ,ಸಿಬಲ್ ನ ಉದ್ಧಟತನದ ಮಾತುಗಳಾಗಿರಲಿ ನ್ಯಾಯಾಂಗ ಸಕಾಲಿಕ ಎಚ್ಚರಿಕೆ ಕೊಟ್ಟಿದೆ.  
  
ಕೇಸನ್ನು ಮುಚ್ಚಿ ನಿರಾಳವಾದ
ಸಿಬಿಐ ನ್ನು ಅದು ತರಾಟೆಗೆ ತೆಗೆದುಕೊಂಡಿತು.ಸಿಬಿಐ ಮುಚ್ಚಿದ ಕೇಸು ಆರುಷಿಯದು. ಅವಳು ಕೊಲೆಯಾಗಿ ಮೂರುವರ್ಷ ಕಳೆದರೂ ಕೊಲೆಗಾರ ಪತ್ತೆಯಾಗಿಲ್ಲ. ಅವಳು ಮೈನರ್ ಹುಡುಗಿ. ಸಂಶಯಾಸ್ಪದವಾಗಿ ಸಾವು ಆಗಿತ್ತು.
ಎರಡು ದಿನದ ನಂತರ ಅವರ ಮನೆ ಮಹಡಿಮೇಲೆ ದೊರೆತ ನೌಕರನ ಶವ ಹೀಗೆ ಅನುಮಾನದ ಹುತ್ತ ಬಲವಾಗಿತ್ತು.
ನೋಯ್ಡಾ ಪೋಲಿಸರು ಸಿಬಿಐಗೆ ಕೇಸು ವರ್ಗಾಯಿಸಿದಾಗ ನಿರಾಳವಾದರು.ಎರಡು ವರೆ ವರ್ಷ ಹೆಣಗಾಡಿದರೂ
ಕೇಸು ಬಗೆಹರಿದಿಲ್ಲ. ಸಿಬಿಐ ಕಾರ್ಯವೈಖರಿ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅವರು ನಡೆಸಿದ ವಿಚಾರಣೆಗಳು,
ಮಂಪರು ಪರೀಕ್ಷೆಗಳು ಫಲ ನೀಡದೇ ಹೋಗಿವೆ. ಕೇಸನ್ನು ಮುಚ್ಚಲು ಅದು ಮನವಿಮಾಡಿದಾಗ ನ್ಯಾಯಾಂಗ ಚಾವಟಿ  ಬೀಸಿದೆ.ಆರುಷಿಯ ತಂದೆ ತಾಯಿ ಯನ್ನು ಬಂಧಿಸಿ ವಿಚಾರಿಸುವಂತೆ ಆದೇಶ ನೀಡಿದೆ.
 ಅವರು ಅಪರಾಧಿಗಳು ಅಂತ ತೀರ್ಪು ಹೊರಬಿದ್ದಿಲ್ಲ ಆದರೂ ಅವರನ್ನು ದೋಷಿ ಅಂತ ಪರಿಗಣಿಸಿ ವಿಚಾರಣೆ ಮಾಡುವಂತೆ
ತೀರ್ಪು ನ್ಯಾಯಾಂಗ ಕೇಳಿದೆ.
ಆರುಷಿ ಶವದ ಪೋಸ್ಟಮಾರ್ಟಮ್ ನಲ್ಲಿ ಅವಳ ಗುಪ್ತಾಂಗ, ಸುತ್ತಲಿನ ಭಾಗ ಔಷಧಿಯಿಂದ ತೊಳೆದ ಉಲ್ಲೇಖವಿಲ್ಲ.
ಅಥವಾ ಬೇಕೂಂತಲೇ ಅದನ್ನು ಮುಚ್ಚಿ ಹಾಕಿದ್ದಾರೆ.

ಎರಡು ಸಾಧ್ಯತೆಗಳಿವೆ...
ಮನೆ ಆಳು ಆರುಷಿಯನ್ನು ರೇಪ್ ಮಾಡಿರಬಹುದು ತಂದೆಗೆ ಗೊತ್ತಾಗಿ ತಲ್ವಾರ್ ಡಾಕ್ಟರ್ ಇಬ್ಬರನ್ನೂ ಮುಗಿಸಿದ್ದಾನೆ. ಇದೊಂಥರಾ "ಮರ್ಯಾದಾ ಹತ್ಯೆ" ಅನ್ನಬಹುದು. ಅಂದರೆ ಮಗಳು ರೇಪ್ ಗೆ ಒಳಗಾಗಿದ್ದಾಳೆ
ಇದು ಗೊತ್ತಾದರೆ ತಮ್ಮ ಗೌರವಕ್ಕೆ ಕುಂದು ಬಂದೀತು ಇದು ತಲ್ವಾರ್ ಅಂದುಕೊಂಡಿರಬಹುದೇನೋ... ಅಥವಾ
ಆಳಿನ ಜೊತೆ ಮಗಳು ಸಂಭಂದ ಇಟ್ಟುಕೊಂಡಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಆವೇಶದಲ್ಲಿ ತಲ್ವಾರ್ ಇಬ್ಬರನ್ನು ಕೊಂದಿರಬಹುದು.

ಇನ್ನೊಂದು ಸಾಧ್ಯತೆ--ನಂಬಲು ಇರಿಸು ಮುರಿಸಾಗಬಹುದು. ಆರುಷಿ ತನ್ನ ತಂದೆಯ ತೃಷೆಗೆ ಒಳಗಾಗಿ ಆಳು
ಇದನ್ನು ಬ್ಲಾಕ್ ಮೇಲ್ ಗೆ ಬಳಸುತ್ತಿದ್ದುದು ರೋಸಿದ ತಲ್ವಾರ್ ಇಬ್ಬರಿಗೂ ಗತಿಕಾಣಿಸಿರಬಹುದು.


ಆರುಷಿಯ ಕೊಲೆ ಅನೇಕ ಮಾಧ್ಯಮಗಳಲ್ಲಿ, ಚಾನೆಲ್ ಗಳಲ್ಲಿ ಚರ್ಚೆಯಾಗಿದೆ. ತಲ್ವಾರ್ ಕೋರ್ಟಗೆ ಹಾಜರಾದಾಗ
ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು .ಹೀಗೆ ಬಿಸಿ ಬಿಸಿ ಸುದ್ದಿ ಹರಿದಾಡಿವೆ. ಸಿಬಿಐಯಂಥ ಸಂಸ್ಥೆಯ ಅಸಮರ್ಥತೆ ನಿರಾಶಾದಾಯಕ. ಎಲ್ಲಕ್ಕೂ ಸೋಜಿಗ ಅಂದರೆ ಡಾಕ್ಟರ್ ತಲ್ವಾರ್ ತನ್ನ ಬಂಧನದ ಸುದ್ದಿ ತಿಳಿದು ನಮ್ಮ ದೇಶವನ್ನು
"ಬನಾನಾ ರಿಪಬ್ಲಿಕ್ " ಅಂತ ನಗಾಡಿದ್ದು.ತಲ್ವಾರ್ ನ ಪ್ರಭಾವ ಖಂಡಿತವಾಗಿ ಮೇಲ್ಮಟ್ಟದಲ್ಲಿ ಇದೆ. ಸುಲಭವಾಗಿ
ತನಿಖೆಯ ಹಾದಿತಪ್ಪಿಸುವ ಚಾಣಾಕ್ಷತನವೂ ಅವನಲ್ಲಿದೆ. ಅವ ನಿಜಕ್ಕೂ ದೋಷಿಯೇ..ನಿಜ ಏನು ಅಂತ ಹೇಳಿದರೆ
ನ್ಯಾಯಾಂಗದ ಅನುಕಂಪ ಖಂಡಿತ ಸಿಗುತ್ತದೆ. ಅವನಲ್ಲಿ  ಆ ಪ್ರಾಮಾಣಿಕತೆ ಇದೆಯೇ..?
ಆರುಷಿ ಇದ್ದಾಗ ಸುದ್ದಿಯಾಗದವಳು ಹೋದಮೇಲೆ ಅದೇಕೆ "ಬ್ರೇಕಿಂಗ್ ನ್ಯೂಸ್" ಆಗಿದ್ದಾಳೆ?

1 ಕಾಮೆಂಟ್‌:

  1. ಭಾರತದಲ್ಲಿ ಕೈರ್ಮ್‌ಅನ್ನು ಮುಚ್ಚಿಹಾಕಬಹುದು ಎನ್ನುವದನ್ನು ಆರುಷಿ ಪ್ರಕರಣ ಢಾಣಾಡಂಗುರ ಹೊಡೆದು ತೋರಿಸುತ್ತಿದೆ. ಆದರೆ ನಮ್ಮ ನ್ಯಾಯಾಂಗದಲ್ಲಿ ಕೆಲವರಾದರೂ ಮನಸ್ಸಾಕ್ಶಿಯುಳ್ಳ ನ್ಯಾಯಾಧೀಶರಿದ್ದಾರೆಂದೇ ಕೆಲವು ಪ್ರಕರಣಗಳಲ್ಲಾದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿದೆ.
    ಸಮಾಜದ ನಾಲ್ಕನೆಯ ಸ್ತಂಭವಾದ ಪತ್ರಿಕಾಂಗವೂ ಅವನತಿಯ ಹಾದಿಯಲ್ಲಿ ಧಾವಿಸುತ್ತಿದೆ!

    ಪ್ರತ್ಯುತ್ತರಅಳಿಸಿ